July 26, 2013

ಕಂದ


 

ನವಮಾಸ ಕಳೆದು ನಾ ನಿನಗೆ
ಜನುಮವನಿತ್ತೆ
ನನ್ನೊಳಗಿನ ಅಮ್ಮನಿಗೆ ನೀ
ಜನುಮವನಿತ್ತೆ

ನಿನ್ನ ಮೃದು ಮಧುರಹಾಸ
ನನ್ನ ಮರುಳಾಗಿಸಿತು
ನಿಸ್ವಾರ್ಥ ಪ್ರೀತಿಯ
ಅನುಭವಿಸಿದೆ ನಿನ್ನಿಂದ
ಬಾಲ್ಯವ ಮತ್ತೆ ಪಡೆದೆ ನಿನ್ನಿಂದ
ನೈಜ ಕಾಳಜಿಯ
ಅರ್ಥೈಸಿಕೊಂಡೆ ನಿನ್ನಿಂದ

ನಿನ್ನ ಮುಗ್ಧತೆಯ ಬೆರಗಾಗಿ ನಾ
ನೋಡಿದೆ

ಸದಾ ನಿನ್ನೊಂದಿಗೆ ಮಗುವಾಗಿ ನಿನ್ನೊಡನಿರುವ
ಬಯಕೆ ನನ್ನೊಲವಿನ ಕಂದ


3 comments:

  1. This comment has been removed by the author.

    ReplyDelete
  2. ವ್ಹಾ ವ್ಹಾ ವ್ಹಾ.... ವಯಸ್ಸಿನ ಕಂದಕವನ್ನು ಕಳೆಯುವ ಕಂದನ ಕಳ್ಳಾಟದಲ್ಲಿ ನನ್ನನ್ನೂ ಭಾಗಿಯಾಗಿಸಿದ್ದಕ್ಕೆ ಆಭಾರಿ ನಾ :-)

    ReplyDelete
  3. ಧನ್ಯವಾದಗಳು...ಹೀಗೆ ಭೇಟಿ ಕೊಡುತ್ತಿರಿ.. ನಾವು ಬರೆಯುತ್ತಿರುತ್ತೇವೆ.. :-)

    ReplyDelete