April 13, 2012

ಬೇಕು

ನನ್ನೊಲವೇ
    ನೀನೆನಗೆ ಬೇಕು

ನಿನ್ನೊಲವು ಸದಾ
     ನನಗಿರ ಬೇಕು

ನಿನ್ನ ಮುದ್ದು ಮಾತು
      ನನ್ನ ಕಿವಿಗೆ ಬೇಕು

ನಿನ್ನ ಮುಗ್ಧ ನೋಟ
      ನನ್ನ ಕಣ್ಣಿಗೆ ಬೇಕು

ನಿನ್ನ ತುಂಟತನ ಸದಾ
       ನನ್ನ ಕಾಡಬೇಕು

ನಿನ್ನ ಮುತ್ತು ನನ್ನ ಕೆನ್ನೆ
        ಕೆಂಪೇರಿಸಬೇಕು

ನಿನ್ನ ಅಪ್ಪುಗೆ ನನಗೆ
     ಮುದ ನೀಡಬೇಕು

ನೀ ಅಮ್ಮಾ ಎಂದಾಗ ನನ್ನ
     ತಾಯ್ತನ ಜಾಗೃತವಾಗಬೇಕು

ನನ್ನ ಮುದ್ದು ಮಗುವೇ
   ನೀ ನನ್ನೊಂದಿಗಿರಬೇಕು