April 10, 2011

ಮಾನವಾ ನೀನ್ಯಾಕೆ ಹೀಗೆ

"ಇದೇನಾ ಸಂಸ್ಕೃತಿ.... ಇದೇನಾ ಸಭ್ಯತೆ" ಎಂದು ಮನಸ್ಸು ಕೇಳುತ್ತಿತ್ತು.ಮನುಷ್ಯ ಯಾಕಿಷ್ಟು ಕ್ರೂರಿ. ಪ್ರಕೃತಿಯ ಮೇಲೆ ಸದಾ ಆತನ ದೌರ್ಜನ್ಯ ಸಾಗುತ್ತಲೇ ಬಂದಿದೆ. ಯಾಕಾಗಿ? ಆಕೆ ಕ್ಷಮಯಾ ಧರಿತ್ರಿ ಎಂದೆ? 

ಇದು ಸುಂದರವಾದ ಕಣ್ವ ಜಲಾಶಯದ ತೀರ. ಆದರೆ ಸುಂದರ ಜಲಾಶಯದ ಸುತ್ತ 'ಪ್ರಕೃತಿ ಪ್ರಿಯ'ರು ಎಸೆದ ಪ್ಲಾಸ್ಟಿಕ್, ಗಾಜುಗಳು. ಬೆಂಗಳೂರಿನಿಂದ ೬೯ ಕಿ.ಮೀ. ದೂರದಲ್ಲಿರುವ ಕಣ್ವ ಜಲಾಶಯ ಭೇಟಿಯೋಗ್ಯ ಸ್ಥಳ. ನಗರದ ಜಂಜಡಗಳಿಂದ ಕೆಲವು ಘಂಟೆಗಳ ಮುಕ್ತಿ, ನೀರಿನ ಸಮೀಪ ಸಮಯ ಕಳೆಯುವ ತಾಣ ಈ ಕಣ್ವ ಜಲಾಶಯ. ಕಣ್ವ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟಿನಿಂದಾಗಿ ಆಗಿರುವ ಕೃತಕ ಸರೋವರ. ಕೆಲವು ಹಕ್ಕಿಗಳ ನೆಚ್ಚಿನ ತಾಣ. ಹಾಗೆಯೇ ಪರಿಸರದ ಬಗ್ಗೆ ನಿಷ್ಕಾಳಜಿ ವಹಿಸುವವರೂ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಆಕ್ಷೇಪಿಸಲು ಅಲ್ಲಿ ಯಾರೂ ಇಲ್ಲ. 
ಇತ್ತೀಚಿಗೆ ಅಲ್ಲಿಗೆ ಹೋಗಿದ್ದೆ ಆದರೆ ಕಸದ ರಾಶಿಯನ್ನು ನೋಡಿ ಅಲ್ಲಿನ ಸೌಂದರ್ಯವನ್ನು ಸವಿಯಲು ಮನಸ್ಸು ಮುರಿದು ಹೋಯ್ತು.

ಹೇಳಿ ಓದುಗರೇ ಇದಕ್ಕೇನು ಮಾಡಬಹುದು????

2 comments:

  1. ಹೌದು ಬೇಜಾರಾಗೋದಂತೂ ನಿಜ....
    ಆದರೆ ಏನು ಮಾಡಲಾದೀತು... ಕಣ್ಮುಂದೆ ಕಂಡರೆ ಹೇಳಿ ತಿಳಿಸಬಹುದು...
    ಅದಕ್ಕೂ ಮೊದಲು ನಮ್ಮಲ್ಲೊಂದು ಅಂತಹ ಸಾಮಾಜಿಕ ಪ್ರಜ್ಞೆ ಯಾವಾಗಲೂ ಇರಬೇಕು....
    ನಮ್ಮಿಂದ ತಪ್ಪು ನಡೆಯಬಾರದು ಯಾವಾಗಲೂ...
    ನಮ್ಮ ವ್ಯಾಪ್ತಿಯಲ್ಲಿ ಬಂದವರಿಗೆ ತಿಳಿ ಹೇಳಬಹುದು....

    ReplyDelete
  2. Thanks for the comments.
    ಭಂಡ ಬಾಳು ಬಾಳುತ್ತಿರುವ ಕೆಲವೇ ಕೆಲವು ಜನರಿಂದ ಇಡೀ ಮನುಕುಲ, ಮುಂದಿನ ಪೀಳಿಗೆ ಸಂಕಷ್ಟಕ್ಕೆ ಸಿಲುಕುತ್ತಲಿದೆ.

    ReplyDelete