January 17, 2011

ಗೆಳೆತನ - ನೋವು ???

ಇದ್ದೆನು ನಾ ನನ್ನಷ್ಟಕ್ಕೆ ನನ್ನ ಗೂಡಲ್ಲಿ
ಏಕೆ ಬಂದೆ ನೀ ನನ್ನ ಬಾಳಲ್ಲಿ
ಗೆಳೆತನದಲ್ಲಿ ವಿಶ್ವಾಸ ಕಳಕೊಂಡಿದ್ದ ಕ್ಷಣದಲ್ಲಿ
ಬಂದೆ ನೀ ಗೆಳೆಯನಾಗಿ ನನ್ನ ಜೀವನದಲ್ಲಿ

 ಹೃದಯದಲ್ಲಿಲ್ಲದ ಆತ್ಮವಿಶ್ವಾಸವ ವೃದ್ದಿಸಿದೆ
ಜೀವನದಲ್ಲಿಲ್ಲದ ಆಕಾಂಕ್ಷೆಯ ಹೆಚ್ಚಿಸಿದೆ
ನಿನ್ನನ್ನು ನನ್ನ ಗೆಳೆಯನಾಗಿ ಪ್ರೀತಿಸಿದೆ
ನನ್ನೆಲ್ಲಾ ವಿಚಾರಧಾರೆಗಳ ನಿನ್ನೊಂದಿಗೆ ಹೇಳಿದೆ

ಈಗ ಏಕೀ ಮೌನ ಗೆಳೆಯಾ
ನಾ ಸಹಿಸಲಾರೆ ನೀ ನೋವಾ
ನಿನ್ನನೊಮ್ಮೆ ನೋಡುವಾಸೆ ಗೆಳೆಯಾ
ಆದರೆ ನನ್ನ ನಾ ಬಂಧಿಸಿರುವೆನಲ್ಲಾ......

3 comments:

  1. ಬದುಕು ವಿಸ್ತಾರ...
    ಬರುವವರು ಸಾವಿರ...
    ಹತ್ತು ಜನ ಈ ಮನದ ಹತ್ತಿರ...
    ಕನಸು ನನಸಿಗೆ ಜೊತೆಯಾಗೊ ಒತ್ತರ..
    ಸ್ನೇಹವೆಂಬುದೆ೦ದೂ ಸು೦ದರ....

    ReplyDelete