December 22, 2010

ಚಳಿಯಲ್ಲೊಂದು ಬೆಚ್ಚಗಿನ ನೆನಪು


ಪ್ರತಿಯೊದು ಕಾಲಕ್ಕೂ ಅದರದೇ ಆದ ಸೌಂದರ್ಯವಿದೆ. ಕಾಲ ಬದಲಾಗುತ್ತಿಲ್ಲದಿದ್ದರೆ ಬದುಕು ನಿಂತ ನೀರಾಗುತ್ತಿತ್ತು. ಪ್ರಕೄತಿಯ ಮನೋಹರ ರೂಪಗಳನ್ನು ಅನುಭವಿಸಲು ಬಹಳ ಸುಂದರ. ಪ್ರತಿ ವರುಷವೂ ಹರುಷ. ಪ್ರಕೄತಿ ಒಂದು ಅದ್ಭುತ. ನಾನು ಸ್ವಭಾವತಃ ಪ್ರಕೄತಿ ಪ್ರಿಯಳು. ಅವಳ ಪ್ರತಿಯೊಂದು ಭಾವನೆಗಳು ಉಲ್ಲಾಸ ತರುತ್ತದೆ, ಹೊಸ ಸ್ಪೂರ್ತಿಯನ್ನು ನೀಡುತ್ತದೆ.

ಈ ಚಳಿಗಾಲದ ರಮ್ಯತೆಯನ್ನು ನಾನು ಇದೀಗ ೮-೯ ವರ್ಷಗಳಿಂದ ಅನುಭವಿಸುತ್ತಿರುವೆ.ನನ್ನೂರಲ್ಲಿ ಇದ್ದಿದ್ದು ಕೇವಲ ೨ ಕಾಲಗಳು. ಚಳಿಗಾಲವನ್ನು ಯಾವತ್ತೂ ಅನುಭವಿಸಿರಲಿಲ್ಲ. ೨ ನೇ ತರಗತಿಯಲ್ಲಿದ್ದಾಗ ಕಲಿತಿದ್ದ ವರ್ಷಕ್ಕೆ ೩ ಕಾಲಗಳಲ್ಲಿ ಮಾತ್ರ ಚಳಿ ಜೀವಂತವಾಗಿರುತ್ತಿತ್ತು. ಹಾಂ.... ಮತ್ತೆ ಇನ್ನೊಂದು ಹಾಡಿತ್ತು..
ಚಳಿರಪ್ಪೊ ಚಳಿರೊ...
ಚಳಿರಮ್ಮ ಚಳಿರೊ....
ಅಮ್ಮನ ಸೀರೆ ಹೊದ್ಕೊಂಡೆ ಚಳಿ ಹೋಗ್ಲೇ ಇಲ್ಲ..
ಅಪ್ಪನ ಕೋಟು ಹಾಕ್ಕೊಂಡೆ ಚಳಿ ಹೋಗ್ಲೇ ಇಲ್ಲ..
ಅಕ್ಕನ ಶಾಲು  ಹೊದ್ಕೊಂಡೆ ಚಳಿ ಹೋಗ್ಲೇ ಇಲ್ಲ..

ಇದು ಚಳಿಯ ಕಲ್ಪನೆಯನ್ನು ಕಟ್ಟಿ ಕೊಟ್ಟಿತ್ತು.
ನನ್ನ ಕಕ್ಕಿಯರ ಮನೆ ಚಳಿಯ ನಾಡಲ್ಲಿ ಇದ್ದುದ್ದರಿಂದ, ಚಳಿಗಾಲದಲ್ಲಿ ಅಲ್ಲೊಮ್ಮೆ ಹೋಗಿದ್ದಾಗ ಅನುಭವಿಸಿದ್ದೆ.

ಚಳಿ ಎಂದಾಕ್ಷಣ ನನಗೆ ನೆನಪಾಗುವುದು ನನ್ನ ಓದಿನ ದಿನಗಳು. ಚಳಿಯ ಊರಿಗೆ ಹೋಗಿ ಸಿಕ್ಕಿಬಿದ್ದಿದ್ದೆ. ದುರಾದೄಷ್ಟಕ್ಕೆ ನನ್ನ ಪರೀಕ್ಷಾ ಕಾಲವೂ ಡಿಸೆಂಬರ್ ತಿಂಗಳುಗಳೇ ಆಗಿತ್ತು.ಬೆಚ್ಚಗೆ ಹೊದ್ದು ಮಲಗೋಣವೆಂದರೆ ಪುಸ್ತಕಗಳ ಕಾಟ. ಓದೋಣವೆಂದರೆ ಚಳಿರಾಯ ಮಲಗಲು ಒತ್ತಾಯಿಸುತ್ತಿದ್ದ.ಅಂತೂ ಪರೀಕ್ಷೆ ಮುಗಿಸಿದಾಗ ಗೆದ್ದ ಭಾವನೆ.ನನ್ನ ’ರೂಮಿ’ ಚಳಿಯ ನಾಡಿನಿಂದಲೇ ಬಂದವಳಾಗಿದ್ದಳು. ಆದ್ದರಿಂದ ಅವಳ ಓದಿಗೆ ಭಂಗ ತರುವವರಾರೂ ಇರುತ್ತಿರಲಿಲ್ಲ.ನನಗೋ ಅವಳ ಓದು ಕಂಡರೆ ಹೊಟ್ಟೆ ಉರಿಯುತ್ತಿತ್ತು. ನಾನೋ ಓದುವೆನೆಂದು ಪುಸ್ತಕ ಹಿಡಿದು ಕುರ್ಚಿಯಲ್ಲಿ ಕೂರುತ್ತಿದ್ದೆ. ನಂತರ ನೆಲಕ್ಕೆ ಸವಾರಿ ಹೋಗುತ್ತಿತ್ತು, ಅನಂತರದಲ್ಲಿ ಪುಸ್ತಕದ ಮೇಲೆಯೇ ನಿದ್ದೆ ಹೋಗುತ್ತಿದ್ದೆ... ಹಾ.. ಹಾ... ಹಾ...
ಬೆಳಗ್ಗೆ ನನ್ನ ’ರೂಮಿ’ ಎದ್ದು ’coffee’ ಮಾಡಿ ಕೊಡುತ್ತಿದ್ದಳು. ವಾಹ್...ನಿಜಕ್ಕೂ ನಾನು ಅದೄಷ್ಟ ಮಾಡಿದ್ದೆ.

ಬೆಂಗಳೂರಿನಲ್ಲಿ ಚಳಿಯ ಸರಿಯಾದ ಅನುಭವ ಪಡೆಯುತ್ತಿದ್ದೇನೆ. ಚಳಿಗಾಲ ಬಂದಾಕ್ಷಣ ಬೆಚ್ಚಗಿನ ಬಟ್ಟೆಗಳು, ಕ್ರೀಮುಗಳು ಎಲ್ಲಾ ಹೊರಬರುತ್ತದೆ. ಕತ್ತಲೂ ಬೇಗ ಹಾಗೆಯೇ ಬೆಳಗೂ ನಿಧಾನ. ಏನೇ ಆದರೂ ಚಳಿಗಾಲದ ಈ ಸೋಮಾರಿತನ  ಬಲು ಪ್ರಿಯವಾದುದು.
ನಿಮ್ಮಲ್ಲೂ ಚಳಿಗಾಲದ ಬೆಚ್ಚಗಿನ ನೆನಪುಗಳಿರಬಹುದು. ನನ್ನೊಡನೆ ಹಂಚಿಕೊಳ್ಳುವಿರಾ.........

7 comments:

 1. ಚಳಿ ಎಂದಕೂಡಲೇ ನೆನಪಾಗುವುದು ಸೂರ್ಯನಿಗೆ ಮುಸುಕುವ ಮಂಜು :) ನನಗೆ ಬೆಳಗಿನ ಈ ದೃಶ್ಯವನ್ನು ನೋಡುವುದೆಂದರೆ ಬಲು ಇಷ್ಟ. ಮಂಜಿನ ಚಾದರ ಹೊದ್ದ ಬೆಟ್ಟ ಗುಡ್ಡ ಎಲ್ಲವನ್ನೂ ಕಣ್ತುಂಬಿಕೊಂಡು ಯಾವ ಕಾಲವಾಯಿತೋ.. ಈ ಬೆಂದಕಾಳೂರಿನಲ್ಲಿ ಬರೀ ಕಲುಷಿತ ಮಂಜೇ ತುಂಬಿರುವಾಗ ಅವುಗಳನ್ನು ಹೊಟ್ಟೆಗೆ ತುಂಬಿಕೊಳ್ಳುವುದೂ ಅಪಾಯವೇ ಸರಿ!

  ಬೆಚ್ಚಗಿನ ನೆನಪುಗಳನ್ನು ಹೊರ ತಂದ ನಿಮ್ಮ ಬರಹ ಇಷ್ಟವಾಯಿತು.

  ReplyDelete
 2. ನಿಜಕ್ಕೂ ಇದು ಬೆಚ್ಚಗಿನ ನೆನಪು !

  ReplyDelete
 3. nimma baraha odi chaliyagtide.... olleya niroopane....

  ReplyDelete
 4. @ತೇಜಸ್ವಿನಿ ಹೆಗಡೆ:
  ಬರಹವನ್ನು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...ಹೌದು.ಬೆಂದಕಾಳೂರು ಕಲ್ಮಷದಲ್ಲಿ ಬೇಯುತ್ತಿದೆ. :-(

  ReplyDelete
 5. @ Subrahmanya :
  Thanks a lot for the comments.

  ReplyDelete
 6. @ ಪ್ರವರ ಕೆ ವಿ:
  ನಿಮ್ಮ ಬೆಚ್ಚಗಿನ ನೆನಪುಗಳಿಂದ ನಿಮಗಾಗಿರುವ ಚಳಿಯನ್ನು ಓಡಿಸಿ... :-)

  ReplyDelete
 7. Bekaadashtive ;-) Nimma baraha ishtavaaytu ;-) Innashtu barali ;-)vandanegalu....

  ReplyDelete