December 13, 2010

ಸ್ತ್ರೀ ಎಂದರೆ ಇಷ್ಟೇ ಸಾಕೇ ?!

ಮನದ ತುಂಬಾ ಮುಗ್ಧತೆಯಿತ್ತು
ಕಣ್ಣ ತುಂಬಾ ಅಚ್ಚರಿಯಿತ್ತು
ಬಾಯ ತುಂಬಾ ಮುಗುಳು ನಗುವಿತ್ತು’
ತಲೆ ತುಂಬಾ ಆಟದ ಗುಂಗಿತ್ತು
ಆಗ ನನ್ನ ಬಳಿ ಬಾಲ್ಯವಿತ್ತು

ಹೃದಯದ ತುಂಬಾ ಪ್ರೀತಿಯಿತ್ತು
ಮನದ ತುಂಬಾ ಸುಂದರ ನೆನಪಿತ್ತು
ಕಣ್ಣ ತುಂಬಾ ಚಂಚಲತೆಯಿತ್ತು
ತನು ತುಂಬಾ ಸುಂದರತೆ ಇತ್ತು
ಆಗ ನನ್ನ ಬಳಿ ಅವನ ಇರವಿತ್ತು

ಕೈಯಲ್ಲೊಂದು ಶಿಶುವಿತ್ತು
ಎದೆ ತುಂಬಾ ಹಾಲಿತ್ತು
ಮನ ತುಂಬಾ ನೆಮ್ಮದಿಯಿತ್ತು
ಮನೆ ತುಂಬಾ ಸಂಭ್ರಮವಿತ್ತು
ಆಗ ನನ್ನ ಬಳಿ ಮಗುವೊಂದಿತ್ತು

ತಲೆ ತುಂಬಾ ಬೆಳ್ಳಿ ಕೂದಲಿದೆ
ಮನ ತುಂಬಾ ಬೇಗೆಯಿದೆ
ಎದೆ ತುಂಬಾ ನಿಟ್ಟುಸಿರಿದೆ
ಒಂಟಿತನ ಸಂಗಾತಿಯಾಗಿದೆ
ನನ್ನ ಬಳಿಯೀಗ ವೃದ್ಧಾಪ್ಯವಿದೆ

5 comments:

  1. tumbaa chennaagide Shalmali avare...

    badukina vividha hantagalannu ele eleyaagi bidisi ittiddeeri...

    ReplyDelete
  2. striya samveedanegalu chennagi moodi bandive...

    ReplyDelete
  3. ಮನಮಿಡಿಯುವ ಕವನ..

    ReplyDelete
  4. ಮೆಚ್ಚಿಕೊಂಡು ಪ್ರತಿಕ್ರಿಯಿಸಿಸಿದ ನಿಮಗೆಲ್ಲರಿಗೂ ಧನ್ಯವಾದಗಳು. ಹೀಗೆಯೇ ಭೇಟಿ ಕೊಡುತ್ತಿರಿ, ಪ್ರತಿಕ್ರಿಯಿಸುತ್ತಿರಿ.

    ReplyDelete