October 06, 2010

ಗೆಳೆಯಾ

ಗೆಳೆಯಾ....
ನಿನ್ನ ಗೆಳೆತನದ ಮೋಡಿ ಅದ್ಭುತ..
ಮರೆಯೋಣವೆಂದು ಬಯಸಿದರೂ ನೆನಪು ಜಾರಲೊಲ್ಲದು
ನಿನ್ನ ಸ್ನೇಹದ ಗಂಧವೂ ಮರೆಯಾಗಲೊಲ್ಲದು
ಏಕೆ ಅಂಥಾ ಮೋಡಿ ಮಾಡಿದೆ ನನ್ನಲಿ
ನಿನ್ನೊಡನೆ ಕಳೆದ ಕೆಲವೇ ದಿನಗಳು
ಜೀವನದುದ್ದಕ್ಕೂ ಬಾಡದ ಹಸಿರ ಮಾಲೆ
ನೀನು ಧೈರ್ಯ ತುಂಬಿದಾ ಕ್ಷಣ
ಜೀವನದ ದಿಕ್ಕು ಬದಲಾಯಿತಾಗ
ನಿನ್ನ ಗೆಳೆಯ ನಾನೆಂದು ನೀ ಒಪ್ಪಿಕೊಂಡ ಕ್ಷಣ
ಏನೋ ನಿಧಿ ಸಿಕ್ಕಂತಾಗಿತ್ತು
ಆದರೆ..........
ಇಂದೇಕೆ ಈ ಭಾವ
ನನ್ನ ನುಡಿಗಳಿಗೆ ಸ್ಪಂದಿಸದಿರುವ ಈ ಕಟು ಮೌನವೇಕೆ ಗೆಳೆಯಾ???

2 comments:

  1. ತುಂಬಾ ತುಂಬಾ ಚೆನ್ನಾಗಿದೆ..

    ReplyDelete
  2. ಭಾವನೆಗಳೇ ಹಾಗೆ ಒಮ್ಮೆ ನಗಿಸಿ ಒಮ್ಮೆ ಕೊಲ್ಲುತ್ತವೆ...ಚನ್ನಾಗಿದೆ ಕವನ

    ReplyDelete