September 21, 2010

ಲೀನ

ಕೂಡು ಕಳೆಗಳ ಲೆಕ್ಕಾಚಾರ
ಅಸ್ತಿತ್ವಕ್ಕಾಗಿ ಹೆಣಗಾಟ
ನಾನು ತಾನೆಂಬೋ ಹೆಮ್ಮೆ
ನನಗೆ ತನ್ನದು ಎಂಬ ಸ್ವಾರ್ಥ
ಎಲ್ಲವೂ ನಾಲ್ಕು ದಿನಗಳ ಕಾಲ
ಕೊನೆಗೊಂದು ದಿನ ನನ್ನದೆಂಬುದು ಎನು ಉಳಿಯಿತು?
ಉಸಿರು ದೇವನ ಸ್ವತ್ತಾಯಿತು
ದೇಹ ಪಂಚಭೂತಗಳಲ್ಲಿ ಲೀನವಾಯಿತು

September 15, 2010

ಪೂರ್ಣ

ನಿನ್ನ ನೋಡಲೆಂಬ ಹಂಬಲದಿ
ನಾ ಕಾದಿದ್ದೆ ಹಲವು ದಿನ
ಪ್ರತಿ ಇರುಳೂ ನಿನ್ನದೇ ಧ್ಯಾನ
ಒಂದರೆಕ್ಷಣವಾದರೂ....
ಕಾಣ ಸಿಗುವೆಯೇನೋ ಎಂಬ
ಆಶಾಭಾವ

ಒಂದು ಪಾಕ್ಷಿಕದ
ವಿರಹದುರಿಯಿಂದ ಬೆಂದು
ಬಳಲಿ ಹೋದೆನು ಇನಿಯಾ
ನೀ ಬರುವ ಆ
ಅಮೃತ ಘಳಿಗೆಗೆ
ಜಾತಕ ಪಕ್ಷಿಯಾದೆ
ನಿನ್ನ ಸ್ವಾಗತಿಸಲು
ಮೈಯೆಲ್ಲಾ ಕಣ್ಣಾಗಿ ನಿಂದರೆ,
ಕಣ್ಣಾಮುಚ್ಚಾಲೆಯಾಡಿಸಿದೆ
ಕೊನೆಗೂ ನೋಡುವ ಕಾಲ ಕೊಡಿಬಂದಾಗ
ಅಯ್ಯೋ.....
ಚಂದಿರಾ,
       ನಿನ್ನನ್ನು ಮೋಡ ನುಂಗಿಯೇ ಬಿಟ್ಟಿತಲ್ಲಾ